ಮಂಗಳೂರು: ಇನ್ಮುಂದೆ ಹಳೆಯಂಗಡಿ ಜಂಕ್ಷನ್‌ನಲ್ಲಿ ನಿಲ್ಲಲ್ಲಿದೆ ಎಲ್ಲಾ ಬಸ್ ಗಳು
Wednesday, November 16, 2022
ಮಂಗಳೂರು: ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಪ್ರಮುಖ ಜಂಕ್ಷನ್ ಹಳೆಯಂಗಡಿಯಲ್ಲಿ ಇನ್ಮುಂದೆ ಎಲ್ಲ ಮಾದರಿಯ ಬಸ್ ನಿಲುಗಡೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ನಿರ್ಣಯಿಸಿ ಆದೇಶ ಹೊರಡಿಸಿದ್ದಾರೆ.
ಇದರಿಂದ ಹಳೆಯಂಗಡಿ ಸುತ್ತಮುತ್ತಲಿನ ಪರಿಸರದ ನಾಗರಿಕರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ನೂತನ ಆದೇಶದಂತೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಎಕ್ಸ್‌ಪ್ರೆಸ್ ಬಸ್ ಗಳು ಕೆಎಸ್ಆರ್ಟಿಸಿ (KSRTC) ಬಸ್ಸುಗಳು ಹಳೆಯಂಗಡಿಯಲ್ಲಿ ನಿಲುಗಡೆ ಹೊಂದಲಿದ್ದು, ಪ್ರಯಾಣಿಕರು ಇದರ ಲಾಭವನ್ನು ಪಡೆಯಬಹುದಾಗಿದೆ.
ಹಾಲಿ ಸ್ಥಿತಿಯಲ್ಲಿ ಸರ್ವಿಸ್ (ಲೋಕಲ್ ಬಸ್) ಹಾಗೂ ಕಾರ್ಕಳ-ಮಂಗಳೂರು ಎಕ್ಸ್‌ಪ್ರೆಸ್ ಬಸ್ ನಿಲುಗಡೆ ಆಗುತ್ತಿತ್ತು. ಇನ್ಮುಂದೆ ಉಡುಪಿ-ಮಂಗಳೂರು ಎಕ್ಸ್‌ಪ್ರೆಸ್ ಬಸ್ ಗಳು ಕೂಡಾ ನಿಲುಗಡೆಯಾಗಲಿದೆ.
(ಫೋಟೋ ಕೃಪೆ: Tulunad-Malenad Busses FB page)
