-->
STATE:  ಮಸೀದಿಗಳಿಗೆ ಧ್ವನಿವರ್ಧಕ ಪರವಾನಗಿ ನೀಡಿದ ರಾಜ್ಯ ಸರ್ಕಾರ...!!!

STATE: ಮಸೀದಿಗಳಿಗೆ ಧ್ವನಿವರ್ಧಕ ಪರವಾನಗಿ ನೀಡಿದ ರಾಜ್ಯ ಸರ್ಕಾರ...!!!



ಬೆಂಗಳೂರು: ರಾಜ್ಯದ 10 ಸಾವಿರಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿ ವರ್ಧಕ ಪರವಾನಗಿಯನ್ನು ರಾಜ್ಯ ಸರ್ಕಾರ ನೀಡಿದೆ.

ಆಜಾನ್‌ ಕೂಗಲು ಧ್ವನಿ ವರ್ಧಕಗಳಿಗೆ ಪರವಾನಗಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ing ...ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 10,889 ಮಸೀದಿಗಳಿಗೆ ಧ್ವನಿ ವರ್ಧಕ ಬಳಸಲು ಪರವಾನಗಿ ನೀಡಿದೆ. 


ಈ ವರ್ಷದ ಆರಂಭದಲ್ಲಿ ಧ್ವನಿ ವರ್ಧಕಗಳನ್ನು ನಿಷೇಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು.. ಆಜಾನ್‌ ವಿರುದ್ಧ ಹನುಮಾನ್‌ ಚಾಲೀಸಾ ಪಠಿಸುವ ಯತ್ನವನ್ನೂ ಹಿಂದೂ ಸಂಘಟನೆಗಳು ಮಾಡಿದ್ದವು. 


ಪೊಲೀಸರು ನೀಡುವ ಪ್ರತಿ ಪರವಾನಗಿಗೆ 450 ರುಪಾಯಿ ಪಾವತಿ ಮಾಡಬೇಕು. ಇದನ್ನು ರಾಜ್ಯದ 10,000 ಕ್ಕೂ ಹೆಚ್ಚು ಮಸೀದಿಗಳು ಹಾಗೂ 17,850 ಸಂಸ್ಥೆಗಳಿಗೆ ಪರವಾನಗಿ ನೀಡಲಾಗಿದೆ. ಈ ಪರವಾನಗಿಯು 2 ವರ್ಷ ಮಾನ್ಯತೆ ಹೊಂದಿರುತ್ತದೆ ಎಂದು ತಿಳಿದುಬಂದಿದೆ.

 ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರ, ಅತಿ ಹೆಚ್ಚು ಧ್ವನಿ ವರ್ಧಕ ಪರವಾನಗಿಗಳನ್ನು ರಾಜಧಾನಿ ಬೆಂಗಳೂರಿನಲ್ಲಿ (1,841 ) ನೀಡಲಾಗಿದೆ. ಇದರಲ್ಲಿ ಮಸೀದಿಗಳು, ದೇವಾಲಯಗಳು, ಚರ್ಚ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಸೇರಿವೆ. 

ವಿಜಯಪುರದಲ್ಲಿ ಅತಿ ಹೆಚ್ಚು ಮಸೀದಿಗಳಿಗೆ ಧ್ವನಿ ವರ್ಧಕ(744) ಪರವಾನಗಿ ನೀಡಲಾಗಿದೆ. ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಬಳಕೆಯನ್ನು ವಿರೋಧಿಸಿ ಈ ವರ್ಷದ ಆರಂಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

 

Ads on article

Advertise in articles 1

advertising articles 2

Advertise under the article