
FILM: ದಕ್ಷಿಣ ಭಾರತದ ಸ್ಟಾರ್ ನಟರ ನಡುವೆ ಬಾಕ್ಸ್ ಆಫೀಸ್ ಗುದ್ದಾಟ...!!!
Wednesday, October 26, 2022
ಚೆನ್ನೈ: ದಳಪತಿ ವಿಜಯ್ ಹಾಗೂ ಸ್ಟಾರ್ ನಟ ಪ್ರಭಾಸ್ ಅಭಿಮಾನಿಗಳು ಅವರ ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಪ್ರಭಾಸ್ ನಟನೆಯ ಆದಿಪುರುಷ್ ಮತ್ತು ವಿಜಯ್ ನಟನೆಯ ವಾರಿಸು ಬಿಡುಗಡೆಗೆ ಸಜ್ಜಾಗಿದೆ.
ಈಗಾಗ್ಲೇ ದಳಪತಿ ವಿಜಯ್ ತಮ್ಮ ವಾರಿಸು ಸಿನಿಮಾ ಮುಂದಿನ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಸಂಕ್ರಾಂತಿಯಂದೇ ಪ್ರಭಾಸ್ ನಟನೆಯ ಆದಿಪುರುಷ್ ಕೂಡಾ ಬಿಡುಗಡೆಯಾಗಲಿದೆ ಎಂದು ಸುದ್ದಿ ಹಬ್ಬಿದೆ.
ಹಾಗಾಗಿ ದಳಪತಿ ವಿಜಯ್ ಹಾಗೂ ಪ್ರಭಾಸ್ ನಡುವೆ ಸಂಕ್ರಾಂತಿಗೆ ಬಾಕ್ಸ್ ಆಫೀಸ್ ಗುದ್ದಾಟ ನಡೆಯಲಿದೆ. ಜೊತೆಗೆ ಇದರಲ್ಲಿ ಯಾರೂ ಯಶಸ್ವಿಯಾಗ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.