-->
ಮಂಗಳೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆದ ಅಖಿಲಾ ನಾಯಕ್ ಅವರ 'ಎಕ್ಸ್‌ಪ್ಲೋಶನ್ ಬಾಕ್ಸ್'!

ಮಂಗಳೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆದ ಅಖಿಲಾ ನಾಯಕ್ ಅವರ 'ಎಕ್ಸ್‌ಪ್ಲೋಶನ್ ಬಾಕ್ಸ್'!

ಮಂಗಳೂರು: ಇಂಜಿನಿಯರಿಂಗ್ ಪದವೀಧರೆ ಶಕ್ತಿನಗರದ ಅಖಿಲಾ ಎಸ್. ನಾಯಕ್ ಅವರು ನಿರ್ಮಿಸಿದ 'ಎಕ್ಸ್‌ಪ್ಲೋಶನ್ ಬಾಕ್ಸ್' ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆದಿದೆ. 

ಇದು ವೈಯಕ್ತಿಕವಾಗಿ ನಿರ್ಮಿಸಿದ ಅತಿದೊಡ್ಡ ಥೀಮ್ಯಾಟಿಕ್ ಬಹುಪದರ ‘ಎಕ್ಸ್‌ಪ್ಲೋಶನ್ ಬಾಕ್ಸ್’ ಅನ್ನೋ ದಾಖಲೆಗೆ ಪಾತ್ರವಾಗಿದೆ. 

ಶಶಿಕುಮಾರ್ ಹಾಗೂ ಶುಭಾ ದಂಪತಿಯ ಪುತ್ರಿಯಾಗಿರುವ ಅಖಿಲಾ ಇವರು ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜುನಲ್ಲಿ ಎಂಸಿಎ ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಮಂಗಳೂರಿನ ಬಿಕ್ಸ್‌ಬೈಟ್ಸ್ ಸೊಲ್ಯೂಷನ್ಸ್ ಸಂಸ್ಥೆಯ ಕೊಕೋಗ್ರಿಡ್ ಘಟಕದಲ್ಲಿ UI/UX ಡಿಸೈನ್ ಅಪ್ರೆಂಟಿಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಭಾರತೀಯ ಸಶಸ್ತ್ರ ಪಡೆಗಳು’ ಎಂಬ ಥೀಮ್‌ನಡಿ ಅವರು ರಚಿಸಿದ ಈ ವಿಶಿಷ್ಟ ಬಹುಪದರ ಕೈತಯಾರಿತ ಎಕ್ಸ್‌ಪ್ಲೋಶನ್ ಬಾಕ್ಸ್ 35 ಸೆಂ.ಮೀ × 35 ಸೆಂ.ಮೀ ಗಾತ್ರದಲ್ಲಿದ್ದು, ಸಂಪೂರ್ಣವಾಗಿ ತೆರೆದಾಗ ಕೊಠಡಿಯಲ್ಲಿ ಹರಡಿದ ಸ್ಥಿತಿಯಲ್ಲಿ 1847 ಸೆಂ.ಮೀ × 105 ಸೆಂ.ಮೀ ವಿಸ್ತಾರ ಹೊಂದಿರುತ್ತದೆ. ಚಾರ್ಟ್ ಪೇಪರ್, ಸೈನಿಕರ ಚಿತ್ರಗಳು, ಕೈಬರೆ ಸಂದೇಶಗಳು, ಪತ್ರಗಳು, ಉಲ್ಲೇಖಗಳು, ಘೋಷಣೆಗಳು ಹಾಗೂ ಚಿತ್ರಕಲೆಗಳ ಮೂಲಕ ಸೃಜನಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ಬಾಕ್ಸ್, ದಿನಕ್ಕೆ 3 ರಿಂದ 4 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿ, ಕೇವಲ 28 ದಿನಗಳಲ್ಲಿ ಪೂರ್ಣಗೊಂಡಿದೆ.

ಈ ಅಪೂರ್ವ ಸಾಧನೆಯನ್ನು ಜನವರಿ 28, 2026 ರಂದು ಅಧಿಕೃತವಾಗಿ ದೃಢೀಕರಿಸಲಾಗಿದ್ದು, ಅಖಿಲಾ ಎಸ್. ನಾಯಕ್ ಅವರ ಈ ಸಾಧನೆ ಮಂಗಳೂರು, ಕರ್ನಾಟಕ ಮತ್ತು ದೇಶದ ಮಟ್ಟದಲ್ಲಿಯೂ ಹೆಮ್ಮೆಯ ವಿಷಯವಾಗಿದೆ.

Ads on article

Advertise in articles 1

advertising articles 2

Advertise under the article